ಕಂಠೀರವ ಸ್ಟುಡಿಯೋ ಸ್ಥಾಪಕರಾದ ತಿಪಟೂರಿನ ಟಿ.ಎಸ್.ಕರಿಬಸಯ್ಯನವರ ೧೦೦ನೇ ಹುಟ್ಟುಹಬ್ಬವನ್ನು ಸ್ಟುಡಿಯೋದಲ್ಲಿನ ನೌಕರರು ದಿನಾಂಕ ೦೭-೦೨-೨೦೧೪ ರಂದು ಆಚರಿಸಿದರು.
ಈ ಸಂದರ್ಭದಲ್ಲಿ ಚಿತ್ರಸಾಹಿತಿ ಪ್ರೋ|| ದೊಡ್ಡರಂಗೇಗೌಡರು, ಹಿರಿಯ ನಟಿ ಗಿರಿಜಾಲೋಕೇಶ್, ಜಯಕರ್ನಾಟಕದ ಎನ್.ಮುತ್ತಪ್ಪರೈ, ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಎಂ. ರವಿಕುಮಾರ್ ಕಂಠೀರವ ಸ್ಟುಡಿಯೋ ನೌಕರರ ಸಂಘದ ಅಧ್ಯಕ್ಷ ಹೆಚ್.ಎನ್.ದೇವರಾಜ್, ಕಿರುತೆರೆ ನಟ ದಯಾನಂದಸಾಗರ್ ಹಾಗೂ ಕರಿಬಸಯ್ಯನವರ ಕುಟುಂಬದವರು ಪುಷ್ಪನಮನ ಸಲ್ಲಿಸಿದರು.